ನಮ್ಮ ಸುಂದರ ಕರ್ನಾಟಕವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭೌಗೋಳಿಕ ಹಾಗೂ ರಾಜಕೀಯ ಸಂಪನ್ನತೆಯನ್ನು ಹೊಂದಿದ ರಾಜ್ಯವಾಗಿದ್ದು, ಭಾರತದಲ್ಲೇ ಅತ್ಯಂತ ಮುಂದುವರೆದ ರಾಜ್ಯವಾಗಿದೆ. ಮುಖ್ಯವಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು, ಮಾಹಿತಿ ತಂತ್ರಜ್ಞಾನದ ತ್ವರಿತ ಪ್ರಗತಿಯಲ್ಲಿ ಪರಿಗಣಿಸಿ "ಸಿಲಿಕಾನ್ ಸಿಟಿ" ಎಂದು ಜಗತ್ತೇ ಕರೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿರುತ್ತದೆ. ನಮ್ಮ ರಾಜ್ಯದ ಸರ್ವತೋಮುಖ ಬೆಳವಣಿಗೆಗಳನ್ನು ಗಮನಿಸಿದಾಗ, ನಾವು ಸುವರ್ಣ ಸಂಭ್ರಮದಲ್ಲಿರುವುದು ಅತಿಶಯೋಕ್ತಿಯಾಗಲಾರದು. ಆದಾಗ್ಯೂ ಕೆಲವೊಂದು ಕುಂದು ಕೊರತೆಗಳಿಗೆ ಸಮರ್ಪಕವಾದ ಪರಿಹಾರಗಳನ್ನು ಕಂಡು ಹುಡುಕಿದಾಗ ಕನ್ನಡಿಗರ ಹೆಮ್ಮೆಯ ರಾಜ್ಯ "ಕರ್ನಾಟಕ" ವನ್ನು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ.
ನಮ್ಮ ರಾಜ್ಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಒಬ್ಬರು ಅಥವಾ ಇಬ್ಬರಿಂದ ಸಾಧ್ಯವಾದ ಮಾತಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿ ಮಾತಿನಂತೆ ಎಲ್ಲಾ ಕನ್ನಡಿಗರ ಒಗ್ಗಟ್ಟಿನ ಫಲದಿಂದ ಅದನ್ನು ಈಡೇರಿಸಲು ಸಾಧ್ಯವಾಗಬಹುದು ಎಂಬುದು ನನ್ನ ವಾದ. ಆದರೆ ಇದರಲ್ಲಿ ಯಾವುದೇ ಜಾತಿ, ಮತ, ಭೇದವಿಲ್ಲದೆ ಶ್ರಮಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಲ್ಲಿ ಅನ್ಯ ರಾಜ್ಯದ ಜನತೆಯನ್ನು ಗೌರವಿಸಿ ತಾವೂ ಗೌರವಿಸಿಕೊಂಡಾಗ, ನಮ್ಮ ರಾಜ್ಯದ ಬಲ ಮತ್ತು ಅದರೊಟ್ಟಿಗೆ ನಮ್ಮ ಬೆಲೆ ಕೂಡಾ ಹೆಚ್ಚುವುದರಲ್ಲಿ ಸಂದೇಹವಿಲ್ಲ.
ಕರ್ನಾಟಕ ರಾಜ್ಯದ ಜನತೆಯು ಇದಕ್ಕಾಗಿ ಶ್ರಮಿಸುತ್ತದೆ ಎಂಬ ಆಶಯದೊಂದಿಗೆ,
ನಿಮ್ಮ ಮಿತ್ರ,
ಶರತ್ ಆಳ್ವ ಕೆ
E-mail: sharathalva84@gmail.com
ಜೈ ಕರ್ನಾಟಕ ಜೈ ಭುವನೇಶ್ವರಿ
ವಂದೇ ಮಾತರಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ