Kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ

Kannada..The Best Language

AboutLanguage





 is the third oldest language of World. (After . . . Sanskrit & Greek)






is as old as 2000 years.






 is 99.99% perfect -logically and scientifically.







Kannadigas got 7 Jnana Peetha Awards . Look at other languages . . . Hindi-- 6, Telugu - 2, Malayalam - 3, Tamil - 2.







Shri VINOBA BHAVE called Kannada script as QUEEN OF WORLD SCRIPTS - " Vishwa LipigaLa RaaNi - Kannada"



So called International language -- English does not have its own Script. English is written in "ROMAN"







So called National Language -- Hindi does not have its own script. Hindi is written in "Devanagari"







Though Tamil has a script, logically it is imperfect -- as common letters are used for many pronunciations..






is as old as 2000 years. You can write what you speak and you can read what you write.







When " Kaviraja Maarga was written . . ." kaaveriyinda , godaavarivaregirpa ..." by Amogha Varsha Nripathunga, English was incradle & Hindi was not born at all.






is the only Indian language for Which a foreigner(Kittal) wrote a dictionary (Shabda Kosha)







Ragale Saahithya can be seen only in Kannada which is of a rare and different kind of literature.







Number of literature awards KUVEMPU got, was highest among any Indian authors.






Chandassu (shatpadis) out pared all other languages





So Let us have PRIDE in using .


Be proud of being a KANNADIGA.

ಗುರುವಾರ

ನಿಮ್ಮ ಬರಹಗಳಿಗೆ ಆಹ್ವಾನ

ಸುವರ್ಣ ಕನ್ನಡವು ನಿಮ್ಮ ಬರಹಗಳಿಗೆ ಆಹ್ವಾನವನ್ನು ನೀಡುತ್ತದೆ. ತಮ್ಮಲ್ಲಿದ್ದ ಯಾವುದೇ ರೀತಿಯ ಕನ್ನಡದ ಲೇಖನ, ಬರಹ, ಕಥೆ, ಕವನ, ಚಿಂತನೆ, ನೆನಪು, ಸಾಧನೆ, ಕೊರತೆಗಳು ಇತ್ಯಾದಿಯಾಗಿ ಸಂಬಂಧಿಸಿದ ಬರಹಗಳನ್ನು ನೇರವಾಗಿ sharathalva84.kannada@blogger.com ಗೆ ಇ ಮೇಲ್ ಕಳುಹಿಸಿ. ನಿಮ್ಮ ಮಿತ್ರರನ್ನೂ ಆಹ್ವಾನಿಸಿ. ಕನ್ನಡದ ಮಿತ್ರರೆಲ್ಲ ಒಂದುಗೂಡೋಣ.. ಬನ್ನಿ ಮಿತ್ರರೇ.. ಸುವರ್ಣ ಕನ್ನಡವನ್ನು ನಿರ್ಮಿಸೋಣ..

ಶುಕ್ರವಾರ

ಸುವರ್ಣ ಕರ್ನಾಟಕ


ನಮ್ಮ ಸುಂದರ ಕರ್ನಾಟಕವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭೌಗೋಳಿಕ ಹಾಗೂ ರಾಜಕೀಯ ಸಂಪನ್ನತೆಯನ್ನು ಹೊಂದಿದ ರಾಜ್ಯವಾಗಿದ್ದು, ಭಾರತದಲ್ಲೇ ಅತ್ಯಂತ ಮುಂದುವರೆದ ರಾಜ್ಯವಾಗಿದೆ. ಮುಖ್ಯವಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು, ಮಾಹಿತಿ ತಂತ್ರಜ್ಞಾನದ ತ್ವರಿತ ಪ್ರಗತಿಯಲ್ಲಿ ಪರಿಗಣಿಸಿ "ಸಿಲಿಕಾನ್ ಸಿಟಿ" ಎಂದು ಜಗತ್ತೇ ಕರೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿರುತ್ತದೆ. ನಮ್ಮ ರಾಜ್ಯದ ಸರ್ವತೋಮುಖ ಬೆಳವಣಿಗೆಗಳನ್ನು ಗಮನಿಸಿದಾಗ, ನಾವು ಸುವರ್ಣ ಸಂಭ್ರಮದಲ್ಲಿರುವುದು ಅತಿಶಯೋಕ್ತಿಯಾಗಲಾರದು. ಆದಾಗ್ಯೂ ಕೆಲವೊಂದು ಕುಂದು ಕೊರತೆಗಳಿಗೆ ಸಮರ್ಪಕವಾದ ಪರಿಹಾರಗಳನ್ನು ಕಂಡು ಹುಡುಕಿದಾಗ ಕನ್ನಡಿಗರ ಹೆಮ್ಮೆಯ ರಾಜ್ಯ "ಕರ್ನಾಟಕ" ವನ್ನು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ.

ನಮ್ಮ ರಾಜ್ಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಒಬ್ಬರು ಅಥವಾ ಇಬ್ಬರಿಂದ ಸಾಧ್ಯವಾದ ಮಾತಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿ ಮಾತಿನಂತೆ ಎಲ್ಲಾ ಕನ್ನಡಿಗರ ಒಗ್ಗಟ್ಟಿನ ಫಲದಿಂದ ಅದನ್ನು ಈಡೇರಿಸಲು ಸಾಧ್ಯವಾಗಬಹುದು ಎಂಬುದು ನನ್ನ ವಾದ. ಆದರೆ ಇದರಲ್ಲಿ ಯಾವುದೇ ಜಾತಿ, ಮತ,  ಭೇದವಿಲ್ಲದೆ ಶ್ರಮಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಲ್ಲಿ ಅನ್ಯ ರಾಜ್ಯದ ಜನತೆಯನ್ನು ಗೌರವಿಸಿ ತಾವೂ ಗೌರವಿಸಿಕೊಂಡಾಗ, ನಮ್ಮ ರಾಜ್ಯದ ಬಲ ಮತ್ತು ಅದರೊಟ್ಟಿಗೆ ನಮ್ಮ ಬೆಲೆ ಕೂಡಾ ಹೆಚ್ಚುವುದರಲ್ಲಿ ಸಂದೇಹವಿಲ್ಲ.

ಕರ್ನಾಟಕ ರಾಜ್ಯದ ಜನತೆಯು ಇದಕ್ಕಾಗಿ ಶ್ರಮಿಸುತ್ತದೆ ಎಂಬ ಆಶಯದೊಂದಿಗೆ,
ನಿಮ್ಮ ಮಿತ್ರ,
ಶರತ್ ಆಳ್ವ ಕೆ

ಜೈ ಕರ್ನಾಟಕ ಜೈ ಭುವನೇಶ್ವರಿ
ವಂದೇ ಮಾತರಂ

ಕನ್ನಡಿಗರಿಗೆ ಆಮಂತ್ರಣ

ನನ್ನ ಆತ್ಮೀಯ ಕನ್ನಡ ಮಿತ್ರರಿಗೆಲ್ಲರಿಗೂ ವ೦ದಿಸುತ್ತಾ, ಹೊಚ್ಚ ಹೊಸ ಬ್ಲಾಗ್ "ಸುವರ್ಣ ಕರ್ನಾಟಕ" ಕ್ಕೆ ತಮ್ಮನ್ನೆಲ್ಲಾ ಹಾರ್ದಿಕವಾಗಿ ಆಮ೦ತ್ರಿಸುತ್ತೇನೆ. ಸುವರ್ಣ ಕರ್ನಾಟಕವು ನಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಆಶೋತ್ತರಗಳನ್ನು ಈಡೇರಿಸುವ೦ತಹ ಅವಕಾಶವನ್ನು ಕಲ್ಪಿಸಿ ಕೊಡುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ. ಈ ಅವಕಾಶವನ್ನು ಕನ್ನಡಿಗರಾದ ತಾವೆಲ್ಲರೂ ಸದುಪಯೋಗಿಸಿಕೊಳ್ಳುವಂತೆ ತಮ್ಮನ್ನು ವಿನ೦ತಿಸಿಕೊಳ್ಳುತ್ತೇನೆ.


ತಮ್ಮ ಲೇಖನಗಳನ್ನು ಕಳಿಸಬಹುದಾದ ವಿಳಾಸ (ಇ ಮೇಲ್): sharathalva84.kannada@blogger.com





ಇ೦ತಿ ನಿಮ್ಮವನೇ ಆದ,
ಶರತ್ ಆಳ್ವ
sharathalva84@gmail.com